Telegram Join My Telegram WhatsApp Join My WhatsApp

ಉಡುಪಿ ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್ (UCSL) ನೇಮಕಾತಿ 2026 – Assistant Manager ಹುದ್ದೆಗಳು ಒಟ್ಟು 2ಖಾಲಿ ಹುದ್ದೆಗಳು ಸಂಪೂರ್ಣ ಮಾಹಿತಿ

ಉಡುಪಿ ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್ (UCSL), ಮಲ್ಪೆ, ಕರ್ನಾಟಕ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಹಾಗೂ ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್‌ನ ಸಂಪೂರ್ಣ ಸಹಾಯಕ ಸಂಸ್ಥೆಯಾಗಿರುವ UCSL ಸಂಸ್ಥೆ 2026ನೇ ಸಾಲಿನ ನೇಮಕಾತಿ ಪ್ರಕಟಣೆ ಬಿಡುಗಡೆ ಮಾಡಿದೆ. ಈ ನೇಮಕಾತಿಯ ಮೂಲಕ Assistant Manager (Electrical) ಮತ್ತು Assistant Manager (Finance) ಹುದ್ದೆಗಳನ್ನು ಒಪ್ಪಂದ ಆಧಾರದಲ್ಲಿ ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕು.

ಹುದ್ದೆಗಳ ವಿವರ ಮತ್ತು ಖಾಲಿ ಸ್ಥಾನಗಳು

ಈ ನೇಮಕಾತಿಯಲ್ಲಿ ಒಟ್ಟು 2 ಹುದ್ದೆಗಳು ಖಾಲಿ ಇವೆ.

  • Assistant Manager (Electrical) – 1 ಹುದ್ದೆ (UR)
  • Assistant Manager (Finance) – 1 ಹುದ್ದೆ (OBC)

ವಿದ್ಯಾರ್ಹತೆ ಮತ್ತು ಅನುಭವದ ವಿವರ

1 Assistant Manager (Electrical)

  • ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಕನಿಷ್ಠ 60% ಅಂಕಗಳೊಂದಿಗೆ ಪದವಿ ಪಡೆದಿರಬೇಕು.AICTE ಅಥವಾ ಸಂಬಂಧಿತ ಪ್ರಾಧಿಕಾರದ ಮಾನ್ಯತೆ ಹೊಂದಿರುವ ಸಂಸ್ಥೆಯಿಂದ ಪದವಿ ಪಡೆದಿರಬೇಕು
  • ಪದವಿ ಪೂರ್ಣಗೊಂಡ ನಂತರ ಕನಿಷ್ಠ 3 ವರ್ಷಗಳ ಅನುಭವ ಹೊಂದಿರಬೇಕು ಅನುಭವವು ಸಂಬಂಧಿತ ತಾಂತ್ರಿಕ ಕ್ಷೇತ್ರದಲ್ಲಿ ಇರಬೇಕು.
  • Ship Building / Ship Repair / Marine / Port / Engineering ಕಂಪನಿಗಳು / ಸರ್ಕಾರಿ ಅಥವಾ ಅರೆಸರ್ಕಾರಿ ಸಂಸ್ಥೆಗಳಲ್ಲಿ ಕೆಲಸ ಮಾಡಿದ ಅನುಭವ ಅಗತ್ಯ. ಪ್ರಮುಖವಾಗಿ ತಾಂತ್ರಿಕ ಹಾಗೂ ನಿರ್ವಹಣಾ ವಿಭಾಗಗಳಲ್ಲಿ ಕೆಲಸ ಮಾಡಿದವರಿಗೆ ಆದ್ಯತೆ ನೀಡಲಾಗುತ್ತದೆ.
  • ERP / SAP / ISO / QMS ಕ್ಷೇತ್ರಗಳಲ್ಲಿ ಅನುಭವ ಹೊಂದಿರುವವರಿಗೆ ಆದ್ಯತೆ.
    ಕಂಪ್ಯೂಟರೈಸ್ ಮಾಡಿದ ವ್ಯವಸ್ಥೆಯಲ್ಲಿ ಕೆಲಸ ಮಾಡಿದ ಅನುಭವ ಇರುವವರಿಗೆ ಹೆಚ್ಚಯಿನೆ ಆದ್ಯತೆ ನೀಡುವುದು.

2 Assistant Manager (Finance)

  • ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ M.Com ಪದವಿ ಕನಿಷ್ಠ 60% ಅಂಕಗಳೊಂದಿಗೆ ಪಡೆದಿರಬೇಕು. ಸಂಬಂಧಿತ ವಿದ್ಯಾರ್ಹತೆ ಸರ್ಕಾರ ಅಥವಾ ಮಾನ್ಯತೆ ಪಡೆದ ಸಂಸ್ಥೆಯಿಂದ ಇರಬೇಕು.
  • Finance & Accounts ಕ್ಷೇತ್ರದಲ್ಲಿ ಪದವಿ ನಂತರ ಕನಿಷ್ಠ 3 ವರ್ಷಗಳ ಅನುಭವ ಅಗತ್ಯ. ಹಣಕಾಸು ನಿರ್ವಹಣೆ ಮತ್ತು ಲೆಕ್ಕಪತ್ರ ವಿಭಾಗದಲ್ಲಿ ಕಾರ್ಯಾನುಭವ ಹೊಂದಿರಬೇಕು.
  • Shipyard / Port / Commercial Establishment / Engineering / ಸರ್ಕಾರಿ ಅಥವಾ ಅರೆಸರ್ಕಾರಿ ಸಂಸ್ಥೆಗಳಲ್ಲಿ ಅನುಭವ ಇರಬೇಕು.
    ಸಂಬಂಧಿತ ಸಂಸ್ಥೆಗಳಲ್ಲಿ ಲೆಕ್ಕಪತ್ರ ಮತ್ತು ಹಣಕಾಸು ಕಾರ್ಯಗಳನ್ನು ನಿರ್ವಹಿಸಿದ ಅನುಭವ ಅಗತ್ಯ.
  • SAP, MS Office, MS Project ಮುಂತಾದ ಕಂಪ್ಯೂಟರ್ ಅಪ್ಲಿಕೇಶನ್‌ಗಳ ಜ್ಞಾನ ಹೊಂದಿರುವವರಿಗೆ ಆದ್ಯತೆ. ಡಿಜಿಟಲ್ ಮತ್ತು ERP ಆಧಾರಿತ ವ್ಯವಸ್ಥೆಯಲ್ಲಿ ಕೆಲಸ ಮಾಡಿದವರಿಗೆ ಹೆಚ್ಚಿನ ಅವಕಾಶ.

ಯಾರು ಅರ್ಜಿ ಸಲ್ಲಿಸಬಹುದು?

ಭಾರತೀಯ ನಾಗರಿಕರು ಮಾತ್ರ ಅರ್ಜಿ ಹಾಕಬಹುದು: ಈ ನೇಮಕಾತಿಗೆ ಕೇವಲ ಭಾರತೀಯ ಪ್ರಜೆಗಳೇ ಅರ್ಹರಾಗಿದ್ದಾರೆ. ಅಭ್ಯರ್ಥಿಗಳು ಭಾರತೀಯ ನಾಗರಿಕತ್ವ ಹೊಂದಿರುವುದನ್ನು ದೃಢಪಡಿಸಬೇಕು. ವಿದೇಶಿ ನಾಗರಿಕರಿಗೆ ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ.

OBC (Non-Creamy Layer) ಅಭ್ಯರ್ಥಿಗಳು ಮೀಸಲು ಹುದ್ದೆಗೆ ಅರ್ಜಿ ಹಾಕಬಹುದು: OBC (NCL) ವರ್ಗಕ್ಕೆ ಸೇರಿದ ಅಭ್ಯರ್ಥಿಗಳು ಮೀಸಲಾತಿ ಸೌಲಭ್ಯ ಪಡೆದು ಅರ್ಜಿ ಸಲ್ಲಿಸಬಹುದು. ಸರ್ಕಾರದ ನಿಯಮಾನುಸಾರ ಮಾನ್ಯ ಮತ್ತು ನವೀಕೃತ ಸಮುದಾಯ ಪ್ರಮಾಣಪತ್ರ ಹೊಂದಿರಬೇಕು. ಮೀಸಲು ಹುದ್ದೆಗೆ ಅರ್ಜಿ ಹಾಕುವಾಗ ಅಗತ್ಯ ದಾಖಲೆಗಳನ್ನು ಸಲ್ಲಿಸುವುದು ಕಡ್ಡಾಯವಾಗಿದೆ.

ಕನಿಷ್ಠ 40% ಅಂಗವೈಕಲ್ಯ ಹೊಂದಿರುವ PwBD ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು: PwBD ವರ್ಗಕ್ಕೆ ಸೇರಿದ ಅಭ್ಯರ್ಥಿಗಳು ಕೂಡ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಅಂಗವೈಕಲ್ಯ ಪ್ರಮಾಣ ಕನಿಷ್ಠ 40% ಇರಬೇಕು ಮತ್ತು ಅದನ್ನು ಮಾನ್ಯ ವೈದ್ಯಕೀಯ ಪ್ರಮಾಣಪತ್ರದ ಮೂಲಕ ಸಾಬೀತುಪಡಿಸಬೇಕು. ಸರ್ಕಾರದ ನಿಯಮಾನುಸಾರ ಎಲ್ಲಾ ಅಗತ್ಯ ದಾಖಲೆಗಳನ್ನು ಸಲ್ಲಿಸುವುದು ಕಡ್ಡಾಯವಾಗಿದೆ.

ವಯೋಮಿತಿ

  • ಗರಿಷ್ಠ ವಯಸ್ಸು: 30 ವರ್ಷ (23 ಮಾರ್ಚ್ 2026ರ ಪ್ರಕಾರ)
  • OBC ಅಭ್ಯರ್ಥಿಗಳಿಗೆ 3 ವರ್ಷ ವಯೋ ಸಡಿಲಿಕೆ
  • PwBD ಮತ್ತು ಮಾಜಿ ಸೈನಿಕರಿಗೆ ಸರ್ಕಾರದ ನಿಯಮಾನುಸಾರ ಸಡಿಲಿಕೆ
  • ಯಾವುದೇ ಸಂದರ್ಭದಲ್ಲೂ 40 ವರ್ಷ ಮೀರಬಾರದು

ವೇತನ ಮತ್ತು ಸೌಲಭ್ಯಗಳು

ಈ ಹುದ್ದೆಗಳು ಗರಿಷ್ಠ 5 ವರ್ಷಗಳ ಒಪ್ಪಂದ ಆಧಾರಿತವಾಗಿವೆ. ವೇತನ ವಿವರ:

  • 1ನೇ ವರ್ಷ – ₹49,500
  • 2ನೇ ವರ್ಷ – ₹50,700
  • 3ನೇ ವರ್ಷ – ₹51,940
  • 4ನೇ ವರ್ಷ – ₹53,220
  • 5ನೇ ವರ್ಷ – ₹54,540

ಇತರೆ ಸೌಲಭ್ಯಗಳು:
 PF (Provident Fund)
 ಅಪಘಾತ ವಿಮೆ
ಮೆಡಿಕಲ್ ಇನ್ಶೂರೆನ್ಸ್
ತಿಂಗಳಿಗೆ ₹3000 ಪ್ರಯಾಣ ಭತ್ಯೆ

ಆಯ್ಕೆ ಪ್ರಕ್ರಿಯೆ

ಈ ನೇಮಕಾತಿಯ ಆಯ್ಕೆ ಪ್ರಕ್ರಿಯೆ ಸ್ಪರ್ಧಾತ್ಮಕ ಹಾಗೂ ಹಂತಗತ ರೀತಿಯಲ್ಲಿ ನಡೆಯುತ್ತದೆ. ಅಭ್ಯರ್ಥಿಗಳ ತಾಂತ್ರಿಕ ಜ್ಞಾನ, ಕಾರ್ಯಾನುಭವ, ಪ್ರಸ್ತುತಪಡಿಸುವ ಸಾಮರ್ಥ್ಯ ಮತ್ತು ವ್ಯಕ್ತಿತ್ವವನ್ನು ಸಂಪೂರ್ಣವಾಗಿ ಮೌಲ್ಯಮಾಪನ ಮಾಡುವ ಉದ್ದೇಶದಿಂದ ಮೂರು ಹಂತಗಳನ್ನು ಒಳಗೊಂಡಿದೆ. ಎಲ್ಲಾ ಹಂತಗಳಲ್ಲಿ ಪಡೆದ ಒಟ್ಟು ಅಂಕಗಳ ಆಧಾರದಲ್ಲಿ ಅಂತಿಮ ಮೆರಿಟ್ ಪಟ್ಟಿ ತಯಾರಿಸಲಾಗುತ್ತದೆ.

ಆಯ್ಕೆ ಪ್ರಕ್ರಿಯೆಯ ಪ್ರಮುಖ ಹಂತಗಳು ಈ ಕೆಳಗಿನಂತಿವೆ:

  • Objective Type Test – 50 ಅಂಕಗಳು
  • PowerPoint Presentation – 30 ಅಂಕಗಳು
  • Personal Interview – 20 ಅಂಕಗಳು

ಮೊದಲ ಹಂತವಾದ Objective Type Test ನಲ್ಲಿ ಒಟ್ಟು 50 ಬಹು ಆಯ್ಕೆ (MCQ) ಪ್ರಶ್ನೆಗಳು ಇರುತ್ತವೆ. ಸಾಮಾನ್ಯ ಜ್ಞಾನ ಹಾಗೂ ವಿಷಯಾಧಾರಿತ ಪ್ರಶ್ನೆಗಳು ಒಳಗೊಂಡಿರುತ್ತವೆ. ಪ್ರತಿಯೊಂದು ಪ್ರಶ್ನೆಗೆ ಒಂದು ಅಂಕ ನೀಡಲಾಗುತ್ತದೆ ಮತ್ತು ಈ ಪರೀಕ್ಷೆಗೆ ಒಟ್ಟು 60 ನಿಮಿಷಗಳ ಸಮಯ ಇರುತ್ತದೆ. ಮುಖ್ಯವಾಗಿ, ಈ ಪರೀಕ್ಷೆಯಲ್ಲಿ ಯಾವುದೇ Negative Marking ಇರುವುದಿಲ್ಲ, ಆದ್ದರಿಂದ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಲು ಅಭ್ಯರ್ಥಿಗಳಿಗೆ ಅವಕಾಶವಿರುತ್ತದೆ.

Objective ಪರೀಕ್ಷೆಯಲ್ಲಿ ಕನಿಷ್ಠ ಅರ್ಹತಾ ಅಂಕಗಳನ್ನು ಪಡೆದ ಅಭ್ಯರ್ಥಿಗಳನ್ನು ಮುಂದಿನ ಹಂತವಾದ PowerPoint Presentation ಮತ್ತು Personal Interview ಗೆ ಕರೆಯಲಾಗುತ್ತದೆ. PowerPoint Presentation ಹಂತದಲ್ಲಿ ಅಭ್ಯರ್ಥಿಗಳು ತಮ್ಮ ಕೆಲಸದ ಅನುಭವ, ತಾಂತ್ರಿಕ ಜ್ಞಾನ ಹಾಗೂ ಪ್ರಾಜೆಕ್ಟ್ ನಿರ್ವಹಣಾ ಸಾಮರ್ಥ್ಯವನ್ನು ಪ್ರದರ್ಶಿಸಬೇಕು. ಇದಕ್ಕೆ 30 ಅಂಕಗಳನ್ನು ನೀಡಲಾಗುತ್ತದೆ.

ಅಂತಿಮ ಹಂತವಾದ Personal Interview ನಲ್ಲಿ ಅಭ್ಯರ್ಥಿಗಳ ಸಂವಹನ ಕೌಶಲ್ಯ, ನಾಯಕತ್ವ ಗುಣ, ಸಮಸ್ಯೆ ಪರಿಹಾರ ಸಾಮರ್ಥ್ಯ ಮತ್ತು ಹುದ್ದೆಗೆ ಹೊಂದಾಣಿಕೆ ಮೌಲ್ಯಮಾಪನ ಮಾಡಲಾಗುತ್ತದೆ. ಇದಕ್ಕೆ 20 ಅಂಕಗಳನ್ನು ಮೀಸಲಿಡಲಾಗಿದೆ.

ಮೂರು ಹಂತಗಳ ಒಟ್ಟು 100 ಅಂಕಗಳ ಆಧಾರದಲ್ಲಿ ಅಂತಿಮ ಆಯ್ಕೆ ಮಾಡಲಾಗುತ್ತದೆ. ಸಮಾನ ಅಂಕಗಳು ಬಂದಲ್ಲಿ ವಿಷಯಾಧಾರಿತ ಪರೀಕ್ಷೆಯ ಅಂಕಗಳು ಹಾಗೂ ವಯೋಮಾನದ ಆಧಾರದಲ್ಲಿ ಮೆರಿಟ್ ಕ್ರಮ ನಿಗದಿಯಾಗುತ್ತದೆ.

ಅರ್ಜಿ ಶುಲ್ಕ

  • ಸಾಮಾನ್ಯ ಮತ್ತು OBC ಅಭ್ಯರ್ಥಿಗಳಿಗೆ ₹400
  • SC/ST/PwBD ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ
  • Online ಮೂಲಕ ಮಾತ್ರ ಪಾವತಿ ಮಾಡಬೇಕು

ಪ್ರಮುಖ ದಿನಾಂಕಗಳು

ವಿವರದಿನಾಂಕ
ಅರ್ಜಿ ಪ್ರಾರಂಭ ದಿನಾಂಕ28 ಫೆಬ್ರವರಿ 2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ23 ಮಾರ್ಚ್ 2026

ಪ್ರಮುಖ ಲಿಂಕಗಳು

ವಿವರಲಿಂಕ್
Cochin Shipyard ವೆಬ್‌ಸೈಟ್ಇಲ್ಲಿ ಕ್ಲಿಕ್ ಮಾಡಿ
ಅಧಿಸೂಚನೆ ಇಲ್ಲಿ ಕ್ಲಿಕ್ ಮಾಡಿ
UCSL ಅಧಿಕೃತ ವೆಬ್‌ಸೈಟ್ಇಲ್ಲಿ ಕ್ಲಿಕ್ ಮಾಡಿ

FAQs (ಸಾಮಾನ್ಯ ಪ್ರಶ್ನೆಗಳು)

1) UCSL ನೇಮಕಾತಿ 2026ರಲ್ಲಿ ಎಷ್ಟು ಹುದ್ದೆಗಳು ಖಾಲಿ ಇವೆ ಮತ್ತು ಯಾವ ಹುದ್ದೆಗಳು?
ಈ ಪ್ರಕಟಣೆಯಡಿಯಲ್ಲಿ ಒಟ್ಟು 2 ಹುದ್ದೆಗಳು ಖಾಲಿ ಇವೆ. Assistant Manager (Electrical) – 1 ಹುದ್ದೆ ಮತ್ತು Assistant Manager (Finance) – 1 ಹುದ್ದೆ ಒಳಗೊಂಡಿವೆ.

2) ಅರ್ಜಿ ಸಲ್ಲಿಸಲು ಅಗತ್ಯ ವಿದ್ಯಾರ್ಹತೆ ಮತ್ತು ಅನುಭವ ಏನು?
Electrical ಹುದ್ದೆಗೆ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಪದವಿ (60% ಅಂಕಗಳು) ಹಾಗೂ 3 ವರ್ಷಗಳ ಅನುಭವ ಅಗತ್ಯ. Finance ಹುದ್ದೆಗೆ M.Com (60% ಅಂಕಗಳು) ಮತ್ತು Finance & Accounts ಕ್ಷೇತ್ರದಲ್ಲಿ 3 ವರ್ಷಗಳ ಅನುಭವ ಬೇಕು.

3) ಗರಿಷ್ಠ ವಯೋಮಿತಿ ಮತ್ತು ವಯೋಸಡಿಲಿಕೆ ಏನು?
23 ಮಾರ್ಚ್ 2026ರ ಪ್ರಕಾರ ಗರಿಷ್ಠ ವಯಸ್ಸು 30 ವರ್ಷ. OBC ಅಭ್ಯರ್ಥಿಗಳಿಗೆ 3 ವರ್ಷ ವಯೋಸಡಿಲಿಕೆ ಇದೆ. PwBD ಮತ್ತು ಮಾಜಿ ಸೈನಿಕರಿಗೆ ಸರ್ಕಾರದ ನಿಯಮಾನುಸಾರ ಸಡಿಲಿಕೆ ನೀಡಲಾಗುತ್ತದೆ.

4) ಅರ್ಜಿ ಶುಲ್ಕ ಎಷ್ಟು ಮತ್ತು ಯಾರು ವಿನಾಯಿತಿ ಪಡೆಯುತ್ತಾರೆ?
ಸಾಮಾನ್ಯ ಮತ್ತು OBC ಅಭ್ಯರ್ಥಿಗಳಿಗೆ ₹400 ಅರ್ಜಿ ಶುಲ್ಕ ವಿಧಿಸಲಾಗಿದೆ. SC/ST/PwBD ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ವಿನಾಯಿತಿ ಇದೆ.

5) ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ?
Objective Type Test (50 ಅಂಕ), PowerPoint Presentation (30 ಅಂಕ) ಮತ್ತು Personal Interview (20 ಅಂಕ) ಮೂಲಕ ಒಟ್ಟು 100 ಅಂಕಗಳ ಆಧಾರದಲ್ಲಿ ಆಯ್ಕೆ ಮಾಡಲಾಗುತ್ತದೆ. Objective ಪರೀಕ್ಷೆಯಲ್ಲಿ Negative Marking ಇರುವುದಿಲ್ಲ.

6) ಅರ್ಜಿ ಸಲ್ಲಿಸುವ ವಿಧಾನ ಮತ್ತು ಕೊನೆಯ ದಿನಾಂಕ ಯಾವುದು?
ಅರ್ಜಿ ಕೇವಲ ಆನ್‌ಲೈನ್ ಮೂಲಕ ಅಧಿಕೃತ ವೆಬ್‌ಸೈಟ್‌ನಲ್ಲಿ ಸಲ್ಲಿಸಬೇಕು. ಅರ್ಜಿ ಪ್ರಾರಂಭ ದಿನಾಂಕ 28 ಫೆಬ್ರವರಿ 2026 ಮತ್ತು ಕೊನೆಯ ದಿನಾಂಕ 23 ಮಾರ್ಚ್ 2026 ಆಗಿದೆ.

Leave a Comment